ಅಂದು ಶಂಕರ್ ನಾಗ್ ಸತ್ತಾಗ ಓಡೋಡಿ ಬಂದಿದ್ದ ರಾಜಕುಮಾರ್ ಮತ್ತು ಪಾರ್ವತಮ್ಮ ಅವರು ಅದೆಷ್ಟು ನೊಂದು ಕಣ್ಣೀರು ಹಾಕಿದ್ದರು ಗೊತ್ತಾ? ವಿಶೇಷವಾದ ವಿಡಿಯೋ ಇಲ್ಲಿದೆ ನೋಡಿ!!

ಸುದ್ದಿ

ಶಂಕರ್ ನಾಗ್ ತಮ್ಮ ಯೋಚನೆಗಳ ಮೂಲಕ ಎಲ್ಲರಿಗಿಂತ ವಿಭಿನ್ನ ಎನಿಸಿಕೊಂಡ ವ್ಯಕ್ತಿ. ದೂರದೃಷ್ಟಿ ಇದ್ದ ಮನುಷ್ಯ. ಸಿನಿಮಾ ಮಾತ್ರವಲ್ಲ ಅದರಿಂದ ಆಚೆಗೆ ತಮ್ಮ ಜೊತೆಗೆ ಇದ್ದವರ ಬಗ್ಗೆಯೇ ಅವರು ಸದಾ ಯೋಚನೆ ಮಾಡುತ್ತಿದ್ದರು. ನಟ-ನಿರ್ದೇಶಕನಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿರುವ ಶಂಕರ್​ ನಾಗ್ ಅವರು ಇಂದು ನಮ್ಮೊಂದಿಗಿಲ್ಲವಾದರು ಅವರ ಅಭಿನಯ ಎಂದೆಂದಿಗೂ ಜೀವಂತ. ಇವರಿಬ್ಬರಿಗೆ ಕಾವ್ಯಾ ಎಂಬ ಮುದ್ದಿನ ಮಗಳಿದ್ದಾಳೆ.

ಸಿನಿಮಾ, ಸಂಗೀತ, ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಶಂಕರ್​ ನಾಗ್ ಅವರು ಕಣ್ಮರೆಯಾಗಿ ಇಂದಿಗೆ 31 ವರ್ಷ. ಶಂಕರ್ ನಾಗ್ ಅವರ ಜನನ 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಆಯಿತು. ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತ್ತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್.

ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಪ್ರೀತಿಸಿ ಮದುವೆಯಾದರು. ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರಿಗೆ ಕ್ರಿಯೇಟಿವ್ ಆಗಿರುವುದೆಂದರೆ ತುಂಬಾ ಇಷ್ಟ. ಅದಕ್ಕಾಗಿ ಕೆಲವೊಂದು ಸರಕಾರಿ ಸ್ವಾಮ್ಯದ ಕೆಲಸವನ್ನು ಸಹ ಮಾಡಿಸಿಕೊಂಡರು. ಅಂದರೆ ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು.

ಅಲ್ಲದೆ ಶಂಕರ್ ನಾಗ್ ಅವರಿಗೆ ಹೊಸ ಕಾರು ಹಾಗೂ ಅವುಗಳ ತಂತ್ರಜ್ಞಾನ ಎಂದರೆ ತುಂಬಾ ಇಷ್ಟವಂತೆ. ಹಾಗೂ ಸದಾ ಹೊಸತನದ ಹುಡುಕಾಟದಲ್ಲಿ ಶಂಕರ್ ನಾಗ್ ಇದ್ದು ಅವರ ಈ ಕೂತುಹಲ ಶೀಲತಾ ಗುಣ ಹಲವಾರು ಚಲನಚಿತ್ರಗಳಲ್ಲಿ ವಿಷಯ ವಸ್ತುವಿನ ಆಯ್ಕೆಯ ವಿಷಯಗಳಾದವು. ಮರಾಠಿ ನಾಟಕಗಳ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ, ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 9೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಶಂಕರನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ‘ಗೆದ್ದ ಮಗ‘. ಅಂತೆಯೇ, ಅಣ್ಣ ಅನಂತ ನಾಗ್ ಅವರೊಡನೆ ‘ಮಿಂಚಿನ ಓಟ‘, ‘ಜನ್ಮದ ಜನ್ಮದ ಅನುಬಂಧ‘ ಮತ್ತು ‘ಗೀತಾ‘ ಚಿತ್ರಗಳನ್ನು ನಿರ್ಮಿಸಿದರು. ಶಂಕರ್ ನಾಗ್ ಅವರಿಗೆ ‘ಏನನ್ನೂ ಬೇಕಾದರು ಮಾಡಬಲ್ಲೆ’ ಎನ್ನುವ ಧೈರ್ಯ ಇತ್ತು.

ಅದಕ್ಕೆ ಒಂದು ಉದಾಹಾರಣೆ ‘ಒಂದು ಮುತ್ತಿನ ಕಥೆ’ ಚಿತ್ರದ ಅಂಡರ್ ವಾಟರ್ ಶೂಟಿಂಗ್. ಶಂಕರ್ ನಾಗ್ ಯಾವುದಕ್ಕೂ ಹೆದರಿದವರಲ್ಲ. ಏಳು ಬೀಳು ಏನೇ ಇದ್ದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು. ಈ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಡರ್​ ವಾಟರ್​ನಲ್ಲಿ ಚಿತ್ರೀಕರಿಸಿದ ಮೊದಲ ಚಿತ್ರವಾಯಿತು.

ಮಾತ್ರವಲ್ಲದೆ ಶಂಕರ್‌ ನಾಗ್ ಹಾಗೂ ರಾಜ್ ಕುಮಾರ್ ನಡುವೆ ಸಂಬಂಧ ನೆಲೆನಿಂತಿತು. ಬಳಿಕ ಕೂಡ ಇನ್ನೊಂದು ಚಿತ್ರವನ್ನು ಮಾಡುವ ಆಲೋಚನೆಯಲ್ಲಿ ಇವರಿಬ್ಬರು ಇದ್ದರು ಆದರೆ ಬಳಿಕ ಶಂಕರ್ ನಾಗ್ ಬಗ್ಗೆ ಅನೇಕ ಗಾಸಿಪ್ ಹರಿದಾಡುತ್ತಿತ್ತು. ಶಂಕರ್ ನಾಗ್ ಎಂದು ಸುಮ್ಮನೆ ಟೈಂ ವೆಸ್ಟ್ ಮಾಡಿದವರಲ್ಲ. ಟೈಂ ಪಾಸ್ ಮಾಡುತ್ತಿರಲಿಲ್ಲ. ಅದೇ ಸಮಯವನ್ನು ಸರಿಯಾಗಿ ಬಳಕೆ ಮಾಡುತ್ತಿದ್ದರು. ಎಲ್ಲರಿಗೂ ಇದ್ದ ಹಾಗೆ ಶಂಕರ್ ನಾಗ್ ಅವರಿಗೂ ಇದ್ದದ್ದು 24 ಗಂಟೆಗಳೇ.

ಆದರೆ ಅದರಲ್ಲಿಯೇ ಅವರು ಇಂತಹ ಸಾಧನೆ ಮಾಡಿದರು. ಕೇವಲ 35 ವಯಸ್ಸಿನಲ್ಲೇ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್‌ ಅಚಾನಕವಾಗಿ ನಮ್ಮನ್ನು ಆಗಲಿ ಹೋದರು.1990 ಸೆಪ್ಟಂಬರ್ 30 ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರ ವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು. ಬಳಿಕ ಇವರ ನಿಧನದ ವಾರ್ತೆ ಎಲ್ಲೆಡೆ ಭಾರಿ ಸುದ್ದಿಯಾಗಿ ಬಳಿಕ ಇವರ ಅಂತ್ಯ ಸಂಸ್ಕಾರಕ್ಕೆ ಹಲವಾರು ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕದ ವರನಟ ರಾಜಕುಮಾರ್ ಕೂಡ ಒಬ್ಬರಾಗಿದ್ದು ಕಂಬನಿ ಮಿಡಿದರು. ಈ ಕುರಿತು ಹಲವು ಫೋಟೋ ಇಂದಿಗೂ ಇದೆ.

Leave a Reply

Your email address will not be published. Required fields are marked *