Picsart 22 12 15 16 29 48 232

ಅಂದು ನಟ ಶಂಕರ್ ನಾಗ್ ಸತ್ತಾಗ, ಓಡೋಡಿ ಬಂದಿದ್ದ ರಾಜಕುಮಾರ್ ದಂಪತಿಗಳು ಪಟ್ಟ ದುಃಖ ನೋಡಿದ್ರೆ ಅಯ್ಯೋ ಅಂತೀರಾ! ಆ ಕ್ಷಣಗಳು ಹೇಗಿತ್ತು ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಆಟೋ ರಾಜ ಎಂದೇ ಗುರುತಿಸಿಕೊಂಡಿದ್ದ ಶಂಕರ್ ನಾಗ್ ಅವರು ನಟನೆ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಗುರುತಿಸಿಕೊಂಡವರು. ಅವರ ವಿಭಿನ್ನವಾದ ಆಲೋಚನೆ ಹಾಗೂ ಅವರ ವ್ಯಕ್ತಿತ್ವ ಜನರನ್ನ ಹೆಚ್ಚು ಆಕರ್ಷಿಸಿತ್ತು. ಹಾಗಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯದ್ಭುತ ನಟ ಎನಿಸಿಕೊಂಡರು. ಶಂಕರ್ ನಾಗ್ ಅವರ ದೂರ ದೃಷ್ಟಿ ವ್ಯಕ್ತಿತ್ವ ಅವರನ್ನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಷ್ಟು ಕಾಲ ಉತ್ತುಂಗದಲ್ಲಿ ಇಟ್ಟಿತ್ತು.

ಕನ್ನಡಿಗರ ಅಚ್ಚುಮೆಚ್ಚಿನ ನಟ ಹಾಗೂ ನಿರ್ದೇಶಕರಾಗಿ ಶಂಕರ್ ನಾಗ್ ಅವರು ಈಗಲೂ ನಮ್ಮೊಂದಿಗೆ ಅಜರಾಮರ. ಒಬ್ಬ ಅತ್ಯುತ್ತಮ ಕಲಾವಿದನನ್ನ ಕಳೆದುಕೊಂಡು 31 ವರ್ಷಗಳೆ ಕಳೆದುಹೋಗಿವೆ. ಆದರೆ ಶಂಕರ್ ನಾಗ್ ಇಂದಿಗೂ ಈ ಕ್ಷಣಕ್ಕೂ ನಮ್ಮ ಜೊತೆಗೆ ಇದ್ದಾರೆ ಎನ್ನುವಂತಹ ಫೀಲ್ ಆಗುತ್ತೆ ಯಾಕಂದ್ರೆ ಅವರ ವ್ಯಕ್ತಿತ್ವವೇ ಅಂತದ್ದು. 1954 ನವೆಂಬರ್ 9ರಂದು, ಹೊನ್ನಾವರದ ಮಲ್ಲಾಪುರ ಎಂಬ ಚಿಕ್ಕ ಊರಿನಲ್ಲಿ ಶಂಕರ್ ನಾಗ್ ಜನಿಸುತ್ತಾರೆ.

ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರಕಟ್ಟೆಯ ಸದಾನಂದ. ಶಂಕರ್ ಅವರನ್ನು ಬಾಲ್ಯದಲ್ಲಿ ಭವಾನಿ ಶಂಕರ್ ಎಂದೇ ಕರೆಯಲಾಗುತ್ತಿತ್ತಂತೆ. ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡವರು. ಆಗಿನ ಕಾಲದಲ್ಲಿ ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವು ಇತ್ತು ಶಂಕರ್ ನಾಗ್ ಅವರಿಗೆ ಸಾಕಷ್ಟು ಕ್ರಿಯೆಟಿಂಗ್ ಆಗಿ ಯೋಚನೆ ಮಾಡುತ್ತಿದ್ದ ಏಕೈಕ ನಟ ಅವರು.

ನಟನೆ ಮಾತ್ರವಲ್ಲದೆ ಸರ್ಕಾರಿ ಸ್ವಾಮ್ಯದ ಕೆಲಸವನ್ನು ಸಹ ಮಾಡುತ್ತಿದ್ದರು. ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರು ಮೆಟ್ರೋ ರೈಲು, ರಂಗ ಮಂದಿರ ಇವೆಲ್ಲದಕ್ಕೂ ನಕ್ಷೆಯನ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲಿಸಿದ್ದರು. ಹೊಸ ರೀತಿಯ ಕಾರು ಇದರಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಇವೆಲ್ಲದರ ಬಗ್ಗೆ ಹೆಚ್ಚು ಕುತೂಹಲ ಬೆಳೆಸಿಕೊಂಡಿದ್ದರು ಶಂಕರ್ ನಾಗ್.

ಹಾಗಾಗಿ ಅವರು ಸಿನಿಮಾ ಆಯ್ದುಕೊಳ್ಳುವ ವಿಚಾರದಲ್ಲಿಯೂ ಕೂಡ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದರು ಮರಾಠಿ ನಾಟಕಗಳ ಮೂಲಕವೇ ಪ್ರತಿ ಜೀವನವನ್ನು ಆರಂಭಿಸಿ ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು ಶಂಕರ್. ಮೊದಲ ಸಿನಿಮಾದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡರು.

ಗೆದ್ದ ಮಗ, ಮಿಂಚಿನ ಓಟ, ಜನ್ಮದ ಜನ್ಮದ ಅನುಬಂಧ, ಗೀತಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ಸುಮಾರು 90ಕ್ಕೂ ಹೆಚ್ಚಿನ ಚಿತ್ರಗಳಲ್ಲಿ 12 ವರ್ಷದ ವೃತ್ತಿ ಜೀವನದಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರರಂಗದ ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು ಶಂಕರ್ ನಾಗ್. ಶಂಕರ್ ನಾಗ್ ಹಾಗೂ ರಾಜಕುಮಾರ್ ಅವರ ಕುಟುಂಬದ ಜೊತೆ ಭಾಂದವ್ಯ ಅತ್ಯುತ್ತಮವಾಗಿತ್ತು.

ಜನ ಇವರಿಬ್ಬರ ಬಗ್ಗೆ ಏನೇ ಮಾತನಾಡಿಕೊಂಡರು ಶಂಕರ್ ನಾಗ್ ಮಾತ್ರ ರಾಜಕುಮಾರ ಅವರ ಜೊತೆಗೆ ಬಹಳ ಅನ್ಯೂನ್ಯ ಸ್ನೇಹವನ್ನು ಇಟ್ಟುಕೊಂಡಿದ್ದರು. 1990 ಸೆಪ್ಟೆಂಬರ್ 30ರಂದು ಶೂಟಿಂಗ್ ಗೆ ಹೋಗಿದ್ದಾಗ ಕಾರ್ ಆಕ್ಸಿಡೆಂಟ್ ಆಗಿ ಶಂಕರ್ ನಾಗ್ ನಿ-ಧ-ನರಾಗುತ್ತಾರೆ. ಕೇವಲ 35 ವರ್ಷಗಳಲ್ಲಿ ಶಂಕರ್ ನಾಗ್ ನಮ್ಮೆಲ್ಲರನ್ನ ಅಗಲಿ ಹೋಗಿದ್ದಾರೆ.

ಶಂಕರ್ ನಾಗ್ ಇನ್ನಿಲ್ಲ ಎನ್ನುವ ವಿಷಯ ತಿಳಿಯುತ್ತಿದ್ದಂತೆ ರಾಜ್ ಕುಟುಂಬದವರು ಕೂಡಲೇ ಸ್ಥಳಕ್ಕೆ ಭಾವಿಸುತ್ತಾರೆ. ವರನಟ ರಾಜ್ ಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ಶಂಕರ್ ನಾಗ್ ಅವರ ದೇಹವನ್ನು ನೋಡಿ ಕಂಬನಿ ಮಿಡಿಯುತ್ತಾರೆ. ಇದೀಗ ರಾಜಕುಮಾರ ಅವರ ನೋವಿನ ಕ್ಷಣಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *