ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಕನ್ನಡಿಗರಿಗೆ ಅಚ್ಚುಮೆಚ್ಚು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಯಾವುದಾದರೂ ಸಿನಿಮಾ ಮೂಲಕ ತೆರೆ ಮೇಲೆ ಎಂಟ್ರಿ ಕೊಟ್ರೆ ಸಾಕು ಸಿಳ್ಳೆಗಳ ಸುರಿಮಳೆ ಕೆಳಿಸುತ್ತೆ. ಇನ್ನು ದರ್ಶನ್ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಕೂಡ ಒಬ್ಬ ಹೀರೋ ಆಗಿದ್ದಾರೆ. ಈವರಿಗೆ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದು ಅವರಿಂದ ಸಹಾಯ ಪಡೆದವರು ಪ್ರತಿಯೊಬ್ಬರೂ ಅವರನ್ನು ದಿನವೂ ನೆನಪಿಸಿಕೊಳ್ಳುತ್ತಾರೆ.
ಆದರೆ ದರ್ಶನ್ ಅವರಿಗೆ ಈ ಸಹಾಯ ಮಾಡುವ ಗುಣ ಬಂದಿದ್ದೆ ಅವರ ತಂದೆ ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಅವರಿಂದ. ಹೌದು, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ತೂಗುದೀಪ್ ಶ್ರೀನಿವಾಸ್ ಅವರ ಆ ಘರ್ಜನೆಗೆ ಮನಸೋಲದವರೇ ಇಲ್ಲ. ಒಬ್ಬ ಖಳನಾಯಕನಾಗಿ ತೂಗುದೀಪ್ ಶ್ರೀನಿವಾಸ್ ಕನ್ನಡದ ಸಿನಿಮಾಗಳನ್ನ ಆವರಿಸಿಕೊಂಡು ಬಿಡುತ್ತಿದ್ದರು ಅವರ ಸಿನಿಮಾಗಳು ಅಂದ್ರೆ ಕೊನೆ ಪಕ್ಷ ಹಾಫ್ ಸೆಂಚುರಿ ಆದ್ರೂ ಬಾರಿಸುತ್ತಿತ್ತು.
ಅಷ್ಟು ಫೇಮಸ್ ನಟ ತೂಗುದೀಪ್ ಶ್ರೀನಿವಾಸ್. ಇನ್ನು ಸಹಾಯ ಮಾಡುವ ವಿಷಯಕ್ಕೆ ಬಂದರೆ ತೂಗುದೀಪ ಶ್ರೀನಿವಾಸ ಕೂಡ ಹಿಂದೆ ಇಲ್ಲ ತಮ್ಮಿಂದ ಆದ ಸಹಾಯವನ್ನು ಇತರರಿಗೆ ಮಾಡುವ ಔಧಾರ್ಯವೂ ಅವರಲ್ಲಿಯೂ ಇತ್ತು. ತೂಗುದೀಪ್ ಶ್ರೀನಿವಾಸ್ ಅವರ ಈ ಮೌಲ್ಯಯುತ ಗುಣದ ಬಗ್ಗೆ ಒಂದು ನಿದರ್ಶನವನ್ನು ನಾವಿಲ್ಲಿ ಹೇಳುತ್ತೇವೆ. ಮುಂದೆ ಓದಿ.
ಸ್ನೇಹಿತರೆ ನೀವು ಕೆಜಿಎಫ್ ನಲ್ಲಿ ಒಬ್ಬ ಕುರುಡು ತಾತನನ್ನು ಗಮನಿಸಿರಬೇಕು ಅಲ್ವಾ. ಆ ಪಾತ್ರವನ್ನು ಅಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದ್ದು ಕೃಷ್ಣಪ್ಪ ಅವರು. ಬಹಳ ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕೃಷ್ಣಪ್ಪ ತೂಗುದೀಪ ಶ್ರೀನಿವಾಸ ಅವರ ಜೊತೆಗೂ ಕೆಲಸ ಮಾಡಿದ್ದಾರೆ. ತೂಗುದೀಪ್ ಶ್ರೀನಿವಾಸ್ ಅಭಿನಯದ ರಾಮ ಪರಶುರಾಮ ಸಿನಿಮಾದಲ್ಲಿ ಕೃಷ್ಣಪ್ಪ ಅವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು.
ಆ ಸಮಯದಲ್ಲಿ ತೂಗುದೀಪ್ ಶ್ರೀನಿವಾಸ್ ಅವರ ಜೊತೆಗಿನ ಅನುಭವಗಳನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಯಾವುದಾದರೂ ಪಾತ್ರವನ್ನು ನಿಭಾಯಿಸಬೇಕು ಅಂದ್ರೆ ಆ ಪಾತ್ರದ ಒಳಗೆ ನುಸುಳಿಕೊಂಡು ಬಿಡುತ್ತಿದ್ದರಂತೆ. ರಾಮ ಪರಶುರಾಮ ಸಿನಿಮಾದಲ್ಲಿ ತೂಗುದೀಪ್ ಶ್ರೀನಿವಾಸ್ ಅವರ ಭುಜದ ಮೇಲೆ ಒಂದು ಹಕ್ಕಿ ಕುಳಿತುಕೊಳ್ಳುವ ದೃಶ್ಯವಿದೆ.
ಯಾವುದೇ ಬಳ್ಳಿಯ ಸಹಾಯವಿಲ್ಲದೆ ತೂಗುದೀಪ್ ಶ್ರೀನಿವಾಸ್ ಅವರ ಭುಜದ ಮೇಲೆ ಕೂತಿತ್ತು ಅದನ್ನು ಕೂರಿಸಿಕೊಂಡೇ ಡೈಲಾಗ್ ಹೇಳಿದ್ರು ತೂಗುದೀಪ್ ಶ್ರೀನಿವಾಸ್. ಈ ಬಗ್ಗೆ ಮಾತನಾಡಿದ ಕೃಷ್ಣಪ್ಪ ಅವರು ಆ ಹಕ್ಕಿಯ ಜೊತೆ ಎಮೋಷನಲ್ ಬಾಂಡಿಂಗ್ ಬೆಳೆಸಿಕೊಂಡಿದ್ದರು ಶ್ರೀನಿವಾಸ್ ಹಾಗಾಗಿ ಅದು ಕೂಡ ಅವರ ಜೊತೆಗೆ ಸಲಗೆಯಿಂದ ಇತ್ತು ಎಂದು ಹೇಳಿದ್ದಾರೆ. ಸಹಾಯ ಮಾಡುವ ಮನೋಭಾವ ಹೊಂದಿದ್ದರು.
ಒಮ್ಮೆ ಕೃಷ್ಣಪ್ಪ ಅವರನ್ನ ಮೈಸೂರಿನ ತಮ್ಮ ಮನೆಗೆ ಕರೆಸಿಕೊಂಡು ಉತ್ತಮವಾಗಿ ಆತಿಥ್ಯ ಮಾಡಿದ್ದರಂತೆ. ಅದೇ ರೀತಿ ಶೂಟಿಂಗ್ ಎಲ್ಲರಿಗೂ ಮನೆಗೆ ಹೊರಡಲು ಶ್ರೀನಿವಾಸ್ ಅನುಕೂಲ ಮಾಡಿಕೊಡುತ್ತಿದ್ದರು ಸಹಾಯ ಮಾಡಿದ್ದಾರೆ ಎಂದು ಅವರೇ ತೂಗುದೀಪ್ ಶ್ರೀನಿವಾಸ್ ಅವರ ಬಗ್ಗೆ ಹೇಳಿದ್ದಾರೆ. ತಂದೆಯಂತೆಯೇ ಮಗ ಡಿ ಬಾಸ್ ಕೂಡ ನಟನೆ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ಮುಂದಿದ್ದಾರೆ.