ಅಂದು ಕೊಂಡಿದ್ದು ಒಂದು ಸರಿಯಾಗಿ ಆಗ್ತಿಲ್ಲ, ಮುಂದಿನ ಹುಟ್ಟು ಹಬ್ಬದ ವೇಳೆಗೆ ಆ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದ ಸ್ಯಾಂಡಲ್ ವುಡ್ ಅಪ್ಸರೆ ರಚಿತಾ ರಾಮ್! ಯಾರೂ ಗೊತ್ತಾ ಆ ವ್ಯಕ್ತಿ ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಅಚ್ಚುಮೆಚ್ಚಿನ ನಟಿ ಎನಿಸಿರುವವರು ಡಿಂಪಲ್ ಕ್ವೀನ್ ರಚಿತಾ ರಾಮ್. ಇತ್ತೀಚಿಗೆ ಬರ್ತಡೇ ಆಚರಿಸಿಕೊಂಡಿರುವ ರಚಿತಾ ರಾಮ್ ಅವರಿಗೆ ಅಭಿಮಾನಿಗಳ ಬಳಗ ಅವರ ಬರ್ತಡೆಯನ್ನು ಇನ್ನಷ್ಟು ಕಲರ್ಫುಲ್ ಮಾಡಿದ್ದಾರೆ. ಹೌದು, ಕನ್ನಡ ಕಂಡ ಅದ್ಭುತ ನಟಿ ರಚಿತಾ ರಾಮ್ ಈ ಗುಳಿಕೆನ್ನೆಯ ಚೆಲುವೆಗೆ ಫಿದಾ ಆಗದವರೇ ಇಲ್ಲ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿರುವ ರಚಿತಾ ರಾಮ್ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.

ಇನ್ನು ರಚಿತರಾಮ್ ದರ್ಶನ್ ಅವರ ಜೊತೆಗೆ ಅಭಿನಯಿಸುವುದರ ಮೂಲಕ ಸಿನಿಮಾ ಜರ್ನಿ ಆರಂಭಿಸಿದರು ಅದಕ್ಕೂ ಮೊದಲು ಧಾರಾವಾಹಿಯಲ್ಲಿ ಅಭಿನಯಿಸಿದ ರಚಿತಾ ರಾಮ್ ಕೂಡ ಕಿರುತೆರೆ ಲೋಕದಿಂದಲೇ ಸಿನಿಮಾಕ್ಕೆ ಬಂದವರು. ಇನ್ನು ಸದ್ಯದಲ್ಲೇ ಬಿಡುಗಡೆಗೆ ರೆಡಿ ಆಗಿರುವ ಕ್ರಾಂತಿ ಸಿನಿಮಾದಲ್ಲಿ ಮತ್ತೆ ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ.

ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ ಕ್ರಾಂತಿ ಸಿನಿಮಾ. ಡಿ ಬಾಸ್ ಸಿನಿಮಾ ಅಂದ್ರೆ ಅದರ ಲೆವೆಲ್ ಬೇರೆ ಆಗಿರುತ್ತೆ. ಅವರ ಅಭಿಮಾನಿಗಳು ಅವರ ಸಿನಿಮಾಗಿ ಕಾಯುತ್ತಿರುತ್ತಾರೆ. ಹಾಗಾಗಿ ಕ್ರಾಂತಿ ಸಿನಿಮಾದ ಮೇಲೆ ನಿರೀಕ್ಷೆ ಹಾಗೂ ಕುತೂಹಲ ದುಪ್ಪಟ್ಟಾಗಿದೆ. ರಚಿತ ರಾಮ್ ವರ್ಷ 30 ಕಳೆದರೂ ಇನ್ನೂ ಮದುವೆ ಆಗಿಲ್ಲ. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಯಾಕೆ ಮದುವೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ.

ಇನ್ನು ರಚಿತರಾಮ್ ಅವರ ಹುಟ್ಟು ಹಬ್ಬದ ದಿನ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರತಿ ವರ್ಷ ಹುಟ್ಟು ಹಬ್ಬದ ದಿನಾಂಕ ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ನೀವು ಏನು ಅಂದುಕೊಂಡಿದ್ದೀರಾ ಎಂದು ಕೇಳಿದಾಗ, ’ನಾನು ಏನು ಅಂದುಕೊಂಡಿದ್ದೇನೋ ಇದುವರೆಗೆ ಅದು ಆಗ್ಲಿಲ್ಲ ಹಾಗಾಗಿ ಈ ವರ್ಷ ಏನನ್ನು ಡಿಸೈಡ್ ಮಾಡ್ಲಿಲ್ಲ.

ದೇವರು ಹೇಗೆ ತೆಗೆದುಕೊಂಡು ಹೋಗುತ್ತಾರೋ ಹಾಗೆ ಜೀವನ ಸಾಗಲಿ. ಏನೇ ಆಗಲಿ ದೇವರು ಎಲ್ಲವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ ಇದರ ಜೊತೆಗೆ ಸಂದರ್ಶಕರು ಇನ್ನೊಂದು ಪ್ರಶ್ನೆಯನ್ನು ಕೇಳುತ್ತಾರೆ ಈ ವರ್ಷ ಒಂಟಿಯಾಗಿ ಬರ್ತಡೇ ಆಚರಿಸಿಕೊಂಡಿದ್ದೀರಿ. ಇಷ್ಟು ವರ್ಷವೂ ಒಬ್ಬರೇ ಬರ್ತಡೆ ಆಚರಿಸಿಕೊಂಡಿದ್ದೀರಿ. ಮುಂದಿನ ವರ್ಷವಾದರೂ ಯಾರದಾದರೂ ಜೊತೆ ಬರ್ತಡೆ ಮಾಡಿಕೊಳ್ಳುತ್ತೀರಾ ಅಂತ ಕೇಳಿದ್ದಕ್ಕೆ ರಚಿತರಾಮ್ ಸಿಕ್ಕಾಪಟ್ಟೆ ನಕ್ಕಿದ್ದಾರೆ.

’ನಾನು ಈ ಪ್ರಶ್ನೆಗೆ ಉತ್ತರ ಕೊಟ್ರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳಬಹುದು. ಎಂದು ಹೇಳುತ್ತಾ, ಮತ್ತೆ ಅದೇ ಹೇಳುತ್ತೇನೆ ದೇವರು ಪ್ಲಾನ್ ಹೇಗಿದೆಯೋ ಹಾಗೆ ಆಗುತ್ತೆ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ಒಟ್ಟಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಮದುವೆಯ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಯಾವ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.

ಹಾಗಂತ ತಾನು ಮದುವೆ ಆಗುವುದಿಲ್ಲ ಎಂದು ಹೇಳಿಲ್ಲ ಹಾಗಾಗಿ ಮುಂದಿನ ವರ್ಷ ಈ ಹೊತ್ತಿಗೆ ಒಂಟಿಯಾಗಿ ರಚಿತಾ ರಾಮ್, ಜಂಟಿಯಾಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಸದ್ಯ ರಚಿತರಾಮ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಸಿನಿಮಾ ಇಂಡಸ್ಟ್ರಿಗೂ ಪಾದಾರ್ಪಣೆ ಮಾಡಿದ್ದಾರೆ. ಜೊತೆಗೆ ಕನ್ನಡದಲ್ಲಿ ಒಂದಲ್ಲ ಒಂದು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ರಚಿತರಾಮ್ ಅವರ ಸಿನಿಮಾವನ್ನ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಜೊತೆಗೆ ಅವರ ಈ ವರ್ಷದ ಬರ್ತಡೇಗೆ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ ಗಳು ಬಂದಿವೆ.

Leave a Reply

Your email address will not be published. Required fields are marked *