PhotoGrid Site 1667366265054

ಅಂದಿನ ಕಾಲದಲ್ಲೇ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ ವಿಷ್ಣುವರ್ಧನ್ ಅವರು ಯಾವುದೇ ಆಸ್ತಿ ಅಂತಸ್ತು ಮಾಡಿ ಇಡಲಿಲ್ಲ ಯಾಕೆ ಗೊತ್ತಾ? ಆ ಹಣವನ್ನು ಈ ಕರ್ಣ ಏನು ಮಾಡುತ್ತಿದ್ದರು ನೀವೇ ನೋಡಿ!!

ಸುದ್ದಿ

ಸ್ನೇಹಿತರೆ, ಕರ್ನಾಟಕ ಕಂಡಂತಹ ಅಮೂಲ್ಯವಾದ ಮುತ್ತು ರತ್ನಗಳಲ್ಲಿ ಡಾಕ್ಟರ್ ವಿಷ್ಣುವರ್ಧನ್ ಕೂಡ ಒಬ್ಬರು. ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಂತಹ ವಿಷ್ಣು ದಾದಾ ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಂತಹ ಮೇರು ನಟ. ಹೀಗೆ ವರ್ಷದಲ್ಲಿ ಎರಡು ಮೂರು ಸಿನಿಮಾಗಳನ್ನು ಮಾಡಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು ವಿಷ್ಣುವರ್ಧನ್ ಮಾತ್ರ ತಮ್ಮ ಹೆಂಡತಿ ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಲಿಲ್ಲ.

ಹಾಗಾದ್ರೆ ದುಡಿದ ದುಡ್ಡನ್ನೆಲ್ಲ ವಿಷ್ಣು ಏನು? ಮಾಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಕನ್ನಡ ಚಿತ್ರರಂಗ ಕಂಡಂತಹ ಅತ್ಯದ್ಭುತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಾಗ ನಾಗರಹಾವು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ನಟ ವಿಷ್ಣುವರ್ಧನ್.

ಅನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ತಮ್ಮದೇ ಆದ ಸಿನಿ ದಾರಿಯಲ್ಲಿ ಮುಂದೆ ಸಾಗಿದರು. ಹೌದು ಗೆಳೆಯರೇ ಈ ಬಂಧನ, ಸೂರ್ಯವಂಶ, ಆಸೆಗೊಬ್ಬ ಮೀಸೆಗೊಬ್ಬ, ಸೂರಪ್ಪ ನಾಯಕ, ಆಪ್ತಮಿತ್ರ, ಯಜಮಾನ, ಆಪ್ತರಕ್ಷಕ ಹೀಗೆ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತ ಸಿನಿ ಪ್ರೇಕ್ಷಕರಿಗೆ ಮನೋರಂಜನೆಯ ಮಹದೂಟವನ್ನೇ ಬಡಿಸಿದರು.

ಇನ್ನು ವಿಷ್ಣುವರ್ಧನ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ತಮ್ಮದೇ ಸಿನಿಮಾದ ನಾಯಕ ನಟಿ ಭಾರತೀ ಅವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ವಿಷ್ಣುವರ್ಧನ್ ಮತ್ತು ಭಾರತೀ ದಂಪತಿಗೆ ಚಂದನ ಮತ್ತು ಕೀರ್ತಿ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದು, ಅವರು ಸಿನಿಮಾ ಕ್ಷೇತ್ರದಿಂದ ಕೊಂಚ ದೂರ ಉಳಿದು ತಮ್ಮ ವೈಯಕ್ತಿಕ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಿದ್ದವರು. ಆದರೂ ಕೂಡ ತಮ್ಮ ಹೆಂಡತಿ ಮಕ್ಕಳಿಗಾಗಿ ಕೊನೆಯ ಕಾಲದಲ್ಲಿ ಯಾವುದೇ ಆಸ್ತಿ ಮಾಡಲಿಲ್ಲ. ಹೌದು ಗೆಳೆಯರೇ ವಿಷ್ಣುವರ್ಧನ್ ಅವರು ಒಂದು ಮನೆ ಮತ್ತು ಕೆಲವು ಎಕ್ಕರೆ ಜಮೀನನ್ನು ಬಿಟ್ಟರೆ, ಇತರೆ ಸ್ಟಾರ್ ನಟರಂತೆ ಮಕ್ಕಳಿಗಾಗಿ ಆಸ್ತಿ ಮಾಡಿದವರಲ್ಲ. ಬದಲಿಗೆ ಮಕ್ಕಳನ್ನೇ ಆಸ್ತಿ ಮಾಡಬೇಕೆಂಬ ಮನೋಭಾವದಲ್ಲಿದ್ದವರು.

ಹೀಗಾಗಿ ತಾವು ದುಡಿದ 100% ನಷ್ಟು ಹಣದಲ್ಲಿ 80% ಹಣವನ್ನು ಬಡವರಿಗಾಗಿ ಮೀಸಲಿಟ್ಟಿದ್ದರು. ಕಷ್ಟ ಎಂದು ಬೇಡಿ ಬಂದವರನ್ನು ಬರೀ ಕೈಯಲ್ಲಿ ಕಳಿಸುತ್ತಿದ್ದವರಲ್ಲ ನಮ್ಮ ದಾದಾ. ಅಷ್ಟೇ ಯಾಕೆ ನಮ್ಮ ಸ್ಯಾಂಡಲ್ ವುಡ್ ಕಂಡಂತಹ ಕರ್ಣ ಎಂದರೆ ಅದು ವಿಷ್ಣುವರ್ಧನ್. ಬಲಗೈಯಲ್ಲಿ ಮಾಡಿದಂತಹ ಸಹಾಯ ಎಡಗೈಗೂ ಗೊತ್ತಾಗಬಾರದು ಎಂಬ ಮಾತನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿದಂತಹ ವಿಷ್ಣುವರ್ಧನ್.

ಅವರ ಕೊನೆಗಾಲದಲ್ಲಿಯೂ ಅವರ ಸಮಾಜಮುಖಿ ಕಾರ್ಯಗಳ ಕುರಿತು ಮಾಹಿತಿ ಹೊರ ಬರಬಾರದೆಂಬ ಉದ್ದೇಶದಲ್ಲಿದ್ದವರು. ಅದರಂತೆ ಕೊನೆಯವರೆಗೂ ಜನರಿಗಾಗಿ ಹಾಗೂ ತಮ್ಮ ಅಭಿಮಾನಿಗಳಿಗಾಗಿ ಸರ್ವಸ್ವವನ್ನೇ ದಾನ ಮಾಡಿದ ವಿಷ್ಣು ತಮ್ಮ ಹೆಂಡತಿ ಮಕ್ಕಳಿಗಾಗಿ ಏನನ್ನು ಮಾಡಲಾಗಲಿಲ್ಲ. ನೀವು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಆಗಿದ್ದಲ್ಲಿ ತಪ್ಪದೇ ಅವರ ಹೆಸರನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *